Posts

ಕನಸಿನಲ್ಲೊಂದು ಸಂಭಾಷಣೆ

ಕೆಲವು ಹಾಡುಗಳಲ್ಲಿ ಕೇಳಿದ್ದೆ... "ಕಣ್ ಕಣ್ ನ ಸಲಿಗೆ..." ಕೆಲವು ಕವನಗಳಲ್ಲಿ ಓದಿದ್ದೆ... "ಮನಸುಗಳು ಮಾತಾಡುತ್ತವೆಯಂತೆ..." ಸಿನಿಮಾಗಳಲ್ಲೂ ಇದೇ ರೀತಿಯ ಮಾತುಗಳನ್ನು ನೋಡಿದ್ದೆ. ಮೊದಮೊದಲು ಇವೆಲ್ಲವೂ ಕೇವಲ ಸಾಹಿತ್ಯ, ಕಲ್ಪನೆ ಅಂದುಕೊಂಡಿದ್ದೆ. ಆದರೆ ಯಾಕೋ ಆ ಸಾಲುಗಳು ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದ್ದವು. ಇದು ನಿಜವಾಗಿಯೂ ಆಗುತ್ತಾ...? ಯಾರಿಗಾದರೂ ಆಗಿದೆಯಾ...? ಹೇಗಾಗುತ್ತೆ...? ಯಾವಾಗಾಗುತ್ತೆ...? ಅನ್ನುವ ಪ್ರಶ್ನೆಗಳು ಕೆಲವೊಮ್ಮೆ ಮನಸ್ಸಿನ ಒಂದು ಮೂಲೆಯಲ್ಲಿ ಮೂಡುತ್ತಿರುತ್ತಿದ್ದವು. ಕಾಲ ಕಳೆದಂತೆ ಆ ಪ್ರಶ್ನೆಗಳನ್ನು ಮರೆತೇ ಬಿಟ್ಟಿದ್ದೆ. ಆದರೆ ಜೀವನದಲ್ಲಿ ನಡೆದ ಕೆಲವು ಘಟನೆಗಳು ಮತ್ತೆ ಅವುಗಳನ್ನು ನೆನಪಿಸಿದವು. ಒಮ್ಮೆ ನನ್ನ ಹೆಂಡತಿ... "ನಿನ್ನೆ ರಾತ್ರಿ ನೀನು ನನ್ ಹತ್ರ ಮಾತಾಡಿದಂಗ ಅನಿಸ್ತು..." ಅಂತ ಹೇಳಿದಳು. ಆದರೆ ಆ ದಿನ ನಾವು ಬೇರೆ ಬೇರೆ ಕಡೆ ಇದ್ದೆವು. ಮಾತಾಡಿರಲಿಲ್ಲ ಕೂಡ. ಇನ್ನೊಮ್ಮೆ ಒಬ್ಬ ಸ್ನೇಹಿತ... "ಲೇ... ನನ್ ಕನಸ್ನಾಗ ಬಂದಿ ಏನೋ ಮಾತಾಡಿ ಹೋದಿಯಲ್ಲ..." ಅಂತ ಕೇಳಿದ. ಒಬ್ಬರು ಹೇಳಿದರೆ ಕಾಕತಾಳೀಯ ಅನ್ನಬಹುದು. ಆದರೆ ಬೇರೆ ಬೇರೆ ಸಮಯದಲ್ಲಿ, ಬೇರೆ ಬೇರೆ ಜನ ಹೀಗೆ ಹೇಳಿದಾಗ... ಮನಸ್ಸಿನಲ್ಲಿ ಮರೆತುಹೋಗಿದ್ದ ಆ ಪ್ರಶ್ನೆ ಮತ್ತೆ ಎದುರಿಗೆ ಬಂದು ನಿಂತಿತು. ನಿಜವಾಗಿಯೂ ಮನಸುಗಳು ಮಾತಾಡುತ್ತವೆಯಾ...? ದೂರದಲ್ಲಿದ್ದರೂ ನೆನಪುಗಳು ತಲುಪ...